Prime Day

Como cliente Amazon Prime obtén 3 meses de Audible gratis

Diseño de la portada del título Salma Mathu Surabhi

Salma Mathu Surabhi

Muestra

Suscríbete a la prueba gratuita para poder disfrutar de este libro a un precio exclusivo para suscriptores

Pagar 10,51 € con prueba
Después de los 30 días, 9,99 €/mes. Cancela tu siguiente plan mensual cuando quieras.
Disfruta de más de 90.000 títulos de forma ilimitada.
Escucha cuando y donde quieras, incluso sin conexión
Sin compromiso. Cancela tu siguiente plan mensual cuando quieras.

Salma Mathu Surabhi

De: ವೈದೇಹಿ
Narrado por: Pallavi Rao
Pagar 10,51 € con prueba

Después de los 30 días, 9,99 €/mes. Cancela cuando quieras.

Compra ahora por 15,01 €

Compra ahora por 15,01 €

ವೈದೇಹಿ ಕತೆಗಳನ್ನು ಓದುವುದೆಂದರೆ ಅತ್ಯಂತ ಸೂಕ್ಷ್ಮವಾದ ಶ್ರಾವಣ ಪ್ರತಿಭೆಯೊಂದರ ಮೂಲಕ ಜಗತ್ತನ್ನು ಗ್ರಹಿಸುವ ಕೆಲಸ... ವೈದೇಹಿಯವರ ಕತೆಗಳ ಪಾತ್ರಗಳ ಹುಟ್ಟು, ಅಸ್ತಿತ್ವಗಳು ಅವುಗಳಿಗೆ ವಿಶಿಷ್ಟವಾದ, ಅವುಗಳ ಸಂವೇದನೆಯ ಅವಿಭಾಜ್ಯ ಅಂಶವಾಗಿ, ಕರ್ಣನಿಗೆ ಕವಚ ಕುಂಡಲಗಳಿದ್ದಂತೆ ಇರುವ, ಅವುಗಳ ಮಾತಿನಲ್ಲಿವೆ. ನಮ್ಮ ಓದಿನಲ್ಲಿ ಈ ಪಾತ್ರಗಳು ಪ್ರತ್ಯಕ್ಷವಾಗುವುದು, ನಮ್ಮ ಅನುಭವಲೋಕವನ್ನು ಪ್ರವೇಶಮಾಡಿ ನಿಲ್ಲುವುದು ಅವುಗಳ ಮಾತಿನಿಂದಲೇ. ಇದು ಕೇವಲ ಕತೆಗಾತಿಯ ಜಾಣ್ಮೆ ಅಥವಾ ಕೌಶಲ್ಯದ ವಿಷಯವಲ್ಲ. ಅಥವಾ ಅವರು ಬಳಸುವ ಪ್ರಾದೇಶಿಕ ಭಾಷೆಯ ಸೊಗಡಿನ ವಿಷಯವಲ್ಲ. ಮನುಷ್ಯರ ಅಂತರಂಗದ ಅತ್ಯಂತ ಅನಿರೀಕ್ಷಿತವಾದ, ಗೋಚರಕ್ಕೂ ಬರದಷ್ಟು ಸೂಕ್ಷ್ಮವಾದ, ಸಂಗ್ರಹಿಸಿ ಹೇಳಹೊರಟರೆ ತಮ್ಮ ನೈಜ ಸಂಕೀರ್ಣತೆಯನ್ನು ಕಳೆದುಕೊಂಡು ಉಡುಗಿ ಹೋಗುವಂತಹ ವಿಶಿಷ್ಟವಾದ ಆ ಕ್ಷಣದ್ದೇ ಆದರೂ ಆಯಾ ವ್ಯಕ್ತಿಗಳ ಶೀಲವನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿ ಇರುವ ಮಾತುಗಳ ಬಗ್ಗೆ ನಾನು ಹೇಳುತ್ತಿದ್ದೇನೆ... ಕತೆಗಾತಿಯಾದ ವೈದೇಹಿಯವರ ಶಕ್ತಿಯಿರುವುದು ಈ ಮಾತಿನ ಪ್ರಪಂಚವನ್ನು, ವಾಸ್ತವ ಪ್ರಪಂಚದಷ್ಟೇ ಮೂರ್ತವಾದ, ಸಾಂದ್ರವಾದ, ನಿಬಿಡವಾದ ಮಾತಿನ ಪ್ರಪಂಚವನ್ನು ನಿರ್ಮಿಸುವುದರಲ್ಲಿ. ಅವರ ಕತೆಗಳಲ್ಲಿ ಆಗುವುದು ನಡೆಯುವುದು ಇವುಗಳ ಅಂಶ ಕಡಿಮೆಯೇ. ಆದರೆ ಮಾತುಗಳ ಮೂಲಕ 'ಘಟಿಸುವುದು' ಮಾತ್ರ ಅಚ್ಚರಿ ಹುಟ್ಟಿಸುವಷ್ಟು ವೈವಿಧ್ಯಪೂಣವಾಗಿದೆ, ಸಂಕೀರ್ಣವಾಗಿದೆ. - ರಾಜೇಂದ್ರ ಚೆನ್ನಿ©2021 Storyside IN (P)2021 Storyside IN Antologías y relatos breves Literatura de género Narrativa literaria
adbl_web_anon_alc_button_suppression_c
No hay reseñas aún